Aadi Preethiya Bittu Lyrics – ಆದಿ ಪ್ರೀತಿಯ ಬಿಟ್ಟು

Deal Score0
Deal Score0

Aadi Preethiya Bittu Songs of Zion Kannada Christian Lyrics – ಆದಿ ಪ್ರೀತಿಯ ಬಿಟ್ಟು

ಯೋಹಾನ 21:15
ಪಲ್ಲವಿ: ಆದಿ ಪ್ರೀತಿಯ ಬಿಟ್ಟು ತೊಲಗಿದೆಯಾ -ಓ ನನ್ನ ಪ್ರಿಯನೇ -ಮಾದರಿ ಜೀವಿತವ ತ್ಯಜಿಸಿದೆಯಾ

1. ನೀನೇ ನನ್ನ ರಕ್ಷಕನೆಂದು – ದೇವರ ಕ್ರಿಸ್ತನು ನೀನೆಂದು
ನಿಶ್ಚಯವಾಗಿ ಒಪ್ಪಿಕೊಂಡೆ ನೀ ಸ್ವಂತ ಕೆಲಸಕ್ಕೆ ಸಾಗಿ ಹೋದೆ ||ಆದಿ||

2. ಶಿಲುಬೆ ಹೊರುತ್ತಾ ಯೇಸು ಕರ್ತಗೆ – ಕಾಲವೆಲ್ಲ ಸೇವೆ ಮಾಡುತ್ತಾ
ಎಲ್ಲ ಪ್ರಜೆಗೆ ಸಾಕ್ಷಿ ಕೊಡುತ್ತಾ ಹೋಗ್ವೆನೆಂದ್ಹೇಳಿದೀಯಲ್ಲಾ ||ಆದಿ||

3. ಮನುಷ್ಯ ಸಂಗತಿಗಳನ್ನು ನೆನೆದು – ಮನುಷ್ಯರಿಚ್ಛೆಗೆ ತಲೆಯಬಾಗಿ
ಯೇಸು ಕರ್ತನ ಸಂದೇಹಿಸುತ್ತಾ – ಧನ ಮೋಸದಲ್ಲಿ ಸಿಕ್ಕಿಕೊಂಡೆ ||ಆದಿ||

4. ಏನು ತಿಂದು ಕುಡಿಯ ಬಲ್ಲೆನು – ಏನು ಧರಿಸಿಕೊಳ್ವೆನೆಂದು
ನಂಬಿಕೆಯ ಕಳಕೊಂಡು ನೀನು – ಮಾರಿ ಬಿಟ್ಟೆಯಾ ನಿನ್ನ ಪ್ರಭುವಾ ||ಆದಿ||

5. ಮಹಡಿ ಮನೆ ಹೊಲ ಆಸ್ತಿ ಭೂಮಿ – ನಿನಗಾಗಿ ಎಷ್ಟೋ ಘನತೆಗಳಿಗೆ
ಸಮಯ ಇದುವೆವೆಂದು ತಿಳಿದು ನಿನ್ – ಕರ್ತನ್ನೆದುರಿಸಿ ಹೋಗುವೆಯಾ ||ಆದಿ||

6. ಯೇಸು ಕ್ರಿಸ್ತನ ಸೇವೆಯಲ್ಲಿ – ಯಾವ ಕೊರತೆ ನೋಡಿ ಹೀಗೆ
ಬದಲಾಯಿಸಿದೆ ನಿನ್ನ ನಡತೆ – ಯೇಸು ಪ್ರಭುವು ಅಳುತ್ತಿರುವನು ||ಆದಿ||

7. ನಿನ್ನ ದೀಪವು ಇನ್ನು ಇಹದೊಳ್ – ಆರಿ ಹೋಗುವ ಮುನ್ನ ತಿಳಿದು
ಸಾಧು ಭಾವದಿ ಪ್ರಾರ್ಥಿಸೇಸುವ – ಆದಿ ಪ್ರೀತಿಯಿಂ ಸೇವೆ ಮಾಡು ||ಆದಿ||

Aadi Preethiya Bittu Lyrics in English

Aadi Preethiya Bittu Song Lyrics, ಆದಿ ಪ್ರೀತಿಯ ಬಿಟ್ಟು Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article provides the lyrics for the Kannada Christian song ‘Aadi Preethiya Bittu’.
  • It includes verses reflecting themes of faith and devotion to Jesus Christ.
  • Published by World Kannada Christians, it aims to share Christian songs and devotionals.
  • The song features multiple stanzas, each discussing different aspects of faith and personal struggles.
  • Links to related Kannada Christian songs are also provided for further exploration.

Estimated reading time: 2 minutes

The Lyrics are the property and Copyright of the Original Owners Lyrics here are For Personal and Educational Purpose only! Thanks .
CHRISTIAN MEDIA
      christian Medias - Best Tamil Christians songs Lyrics
      Logo